ನರೇಂದ್ರ ಮೋದಿಯವರ ನಾಯಕತ್ವದ ಗುಜರಾತ್

ಗುಜರಾತ್ ರಾಜ್ಯ ಭಾರತ ದೇಶದ ಗುವಾಂಗ್ದೋಂಗ್(ಚೀನಾ ದೇಶ)

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೇವಲ ದಶಕ ಕಾಲದಲ್ಲಿ ಆ ರಾಜ್ಯ ಸರಕಾರವು ವಿದ್ಯುತ್ ಉತ್ಪಾದನಾ ಯೋಜನೆ, ಉಕ್ಕು-ಕಬ್ಬಿಣ ಉತ್ಪಾದನೆಯ ಯೋಜನೆ, ಪೆಟ್ರೋಲು ಮತ್ತು ರಾಸಾಯನಿಕಗಳ ಉತ್ಪಾದನೆಗೆ ಸಂಬಂಧಿಸಿದ ಕೆಲಸಗಳು, ಕಾರು ತಯಾರಿಕೆಗೆ ಸಂಬಂಧಿಸಿದ ಯೋಜನೆಗಳು,ಟಯರ್/ಚಕ್ರ ತಯಾರಿಕೆಗೆ ಸಂಬಂಧಿಸಿದ ಯೋಜನೆ … ಹೀಗೇ ಹಲವಾರು ಹೊಸಾ ಕೆಲಸಗಳನ್ನು ಆಕರ್ಷಿಸುವಲ್ಲಿ ದೈತ್ಯ ಹೆಜ್ಜೆಗಳನ್ನಿಡುತ್ತ ಮುಂದುವರಿದಿದೆ. ಈ ಬೆಳವಣಿಗೆ ಕಳೆದ ದಶಕದಲ್ಲಿ ಕೋಮು ಗಲಭೆ, ಹಿಂಸಾಚಾರಗಳಿಂದ ಬಾಧಿತರಾದ, ಇನ್ನೂ ಆ ನೋವನ್ನು ಮರೆಯದ ಅಲ್ಪ ಸಂಖ್ಯಾತರ ಮುಖಗಳಲ್ಲೂ ನಗುವನ್ನು ತಂದಿದೆ.

ಈ ಬೆಳವಣಿಗೆ ದೇಶದೊಳಗಿನ ಮತ್ತು ಹೊರಗಿನ-ಜರ್ಮನಿ, ಚೀನಾ, ಇಂಗ್ಲೆಂಡ್ ನಂತಾ ದೇಶಗಳ ಖಾಸಾಗಿ ಬಂಡವಾಳದಾರರು ಗುಜರಾತಿನಲ್ಲಿ ಬಂಡವಾಳ ಹೂಡಲು ಸ್ಪರ್ಧಾತ್ಮಕವಾಗಿ ಮುಂದು ಬಂದಿದ್ದಾರೆ. ಅಮೇರಿಕಾದ ಫ಼ೋರ್ಡ್ ಅವರು “ನಮಸ್ತೆ” ಮಾಡಲೂ ಅಭ್ಯಸಿಸುತ್ತಿದ್ದಾರಂತೆ !
ಗುಜರಾತ್ ನ Gross Domestic Product (GDP)/ನಿವ್ವಳ ದೇಶೀಯ ಉತ್ಪನ್ನ Percent (%)/ಪ್ರತಿ ಶತ ಇಡೀ ಭಾರತ ದೇಶದ್ದನ್ನೇ ಮೀರಿಸುತ್ತದೆ.
ಗುಜರಾತಿನ ಸೌರ ವಿದ್ಯುತ್ ಯೋಜನೆ-ಗುಜರಾತ್ ನ ವಿಸ್ತಾರವಾದ ಸೌರ ಶಕ್ತಿಯ ಬಯಲು ಇಡೀ ದೇಶದ್ದನ್ನೆ ಮೀರಿಸುತ್ತದೆ. ಕೇವಲ ಈ ರಾಜ್ಯವೊಂದೇ ಚೀನಾದ ಸೌರ ಶಕ್ತಿ ಉತ್ಪಾದನೆಯನ್ನು ಹಿಮ್ಮೆಟ್ಟಿಸುತ್ತದೆ. ವಾಸ್ತವದಲ್ಲಿ ಚೀನಾ ದೇಶವು ಈ ಜಗತ್ತಿನ ಅತಿ ಪ್ರಮುಖ solar panels ನ ತಯಾರಕರು, ಅಷ್ಟು ಮಾತ್ರವಲ್ಲದೆ ಅವರಲ್ಲಿ ಯಾರೇ ಅದನ್ನು ಬಯಸಿದಲ್ಲಿ ಒದಗಿಸುವಷ್ಟು ಹೆಚ್ಚುವರಿಯಿದೆ.
ಗುಜರಾತ್ ಸರಕಾರ ಹೇಳುವಂತೆ ಸುಮಾರು ೧೭ ಖಾಸಾಗಿ ಮತ್ತು ರಾಜ್ಯದ ಸಂಸ್ಥೆಗಳು ೯೦೦೦ರೂ.ಗಳಷ್ಟು ಬಂಡಾಯ ಹೂಡಿ, ಪಟಾನ್ ನ ಚರಾಂಕ ಹಳ್ಳಿಯಲ್ಲಿ ೨,೯೬೫ ಎಕ್ರೆ ಭೂಮಿಯಲ್ಲಿ solar panels ನ ಸಾಲುಗಳನ್ನು ಸೌರ ವಿದ್ಯುತ್ ಉತ್ಪಾದನೆಗೆ ಅಳವಡಿಸಲಾಗಿದೆ. ದಿನವೊಂದಕ್ಕೆ ೨೧೪ ಮೆ.ವಾಟ್ ವಿದ್ಯುತ್ ಶಕ್ತಿ ಉತ್ಪಾದಿಸಲಾಗುತ್ತಿದೆ, ಇದು ಚೀನಾದ ೨೦೦ ಮೆ.ವಾಟ್ ನ ಗೋಲ್ಮಂಡ್ ಸೋಲಾರ್ ಪಾರ್ಕ್ ಗಿಂತಲೂ ಹೆಚ್ಚಿಗೆ. ಚಿಕ್ಕ ರಾನ್ ನ ಉಪ್ಪಿನ ಹೊಲಗಳ ಸಮೀಪದಲ್ಲಿ ಗುಜರಾತದ ಮಿರುಗುವ ಕನ್ನಡಿಗಳ ಬಯಲನ್ನು ಕಾಣಬಹುದು. ಇದು ಕಾಣಲು ಮರುಭೂಮಿಯ ಮಧ್ಯದಲ್ಲಿ ಮಿರಿ-ಮಿರಿ ಮಿರುಗುವ ಒಯಸಿಸ್ ಎಂಬಂತೆ ಇದೆ, ಬೆಳ್ಳಿಯ ಪರದೆಯು ವಿಶಾಲವಾದ ನಿರ್ಜನ ಉಸುಕಿನ ಭೂಮಿಯನ್ನು ಸುತ್ತುವರಿದಂತಿದೆ.
ಇದರಿಂದಾಗಿಯೇ, ಭೂಮಿಯ ಬೆಲೆಯು ಗುಜರಾತಿನ ದೂರದ, ಮೂಲೆಯ ಊರುಗಳಲ್ಲಿ ಏರಿದೆ. ಚರಂಕ ಹಳ್ಳಿಯ ಮಾಜೀ ಸರಪಂಚ ಬರುಭಾಯಿ ಅಹಿರ್ ಹೇಳುವಂತೆ, ಡಿ.೨೦೦೯ ರ ಮೊದಲು, ಈ ಕೆಲಸ ಪ್ರಾರಂಭವಾಗುವ ಕಾಲದಲ್ಲಿ ಎಕ್ರೆಯೊಂದಕ್ಕೆ ೨೫,೦೦೦ ರೂ ಇತ್ತಷ್ಟೆ.ಇಂದೀಗ ಸೌರ ಉದ್ಯಾನದ/solar park ನ ಕಾರಣದಿಂದಾಗಿ ಅದರ ೧.೫ ಕಿಮೀ. ಸುತ್ತುಮುತ್ತಲು ಎಕ್ರೆಯೊಂದಕ್ಕೆ ಬೆಲೆ ೬ಲಕ್ಷ ರೂಗಳಷ್ಟಾಗಿದೆ.
ಚರಂಕಾ ಹಳ್ಳಿಯೊಂದಲ್ಲದೆ, ಬಿಸಿಲು ಧಾರಾಳಿರುವ ೧೩ ಇತರ ಜಿಲ್ಲೆಗಳಲ್ಲಿ ೨,೩೭೫ ಎಕ್ರೆಗೂ ಹೆಚ್ಚಿನ ಜಾಗದಲ್ಲಿ ಸೌರ ಉದ್ಯಾನಗಳನ್ನು ಸ್ಥಾಪಿಸಿದ್ದಾರೆ. ಇವು ಹೆಚ್ಚಿನವೂ ಕೃಷಿ ಯೋಗ್ಯ ಭೂಮಿಯಲ್ಲ.೮೪ ಸಂಘಗಳು ಕೈಯೊಂದುಗೂಡಿಸಿ ೪೦ಮೆ.ವಾಟ್ ಉತ್ಪಾದನಾ ಸಾಮರ್ಥ್ಯವಿರುವ ಘಟಕವನ್ನು ಕಟ್ಟಿದ್ದಾರೆ.

ಚರಂಕ ಹಳ್ಳಿ,ಪಟಾನ್ ಗುಜರಾತ್(Solar Panels)
ಚರಂಕ ಹಳ್ಳಿಯ ಬಂಜರು ಮತ್ತು ನಿರುಪಯೋಗಿ ೨೦೦೦ ಎಕ್ರೆ ಭೂಮಿಯನ್ನು ಉಪಯೋಗಿಸಿ ಸೌರ ಉದ್ಯಾನವನ್ನು ಕಟ್ಟಲಾಯಿತು. ಇಲ್ಲಿ ಅದಾಗಲೇ ೨೧೪ಮೆ.ವಾ. ಸೌರ ಶಕ್ತಿಯ ಉತ್ಪಾದನೆ ಆಗುತ್ತಿದೆ, ಅದರ ಸಾಮರ್ಥ್ಯ ೬೦೦ಮೆ.ವಾ. ಈ ಸೌರ ಉದ್ಯಾನ ಪ್ರತಿ ವರ್ಷ ೮ಮಿ.ಟನ್ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಯುತ್ತದೆ ಮತ್ತು ಪ್ರಕೃತಿಯಲ್ಲಿ ದೊರಕುವ ೯೦೦,೦೦೦ಟನ್ ಗ್ಯಾಸ್ ಅನ್ನು ಉಳಿಸುತ್ತಿದೆ.

Image

ಚರಂಕ ಹಳ್ಳಿ,ಪಟಾನ್ ಗುಜರಾತ್(Solar Panels)

ಚರಂಕ ಹಳ್ಳಿಯಲ್ಲಿರುವ ಪ್ರಪಂಚದಲ್ಲೇ ದೊಡ್ಡದಾದ ಸೌರ ಉದ್ಯಾನ

Image

ಸುಡುವ ಬಿಸಿಲಿರುವ, ನೀರಿಲ್ಲದ ಬೆಳೆ ಬೆಳೆಯಲಾಗದ ಪ್ರದೇಶಗಳಲ್ಲಿ ಸೌರ ಶಕ್ತಿ ಉತ್ಪಾದನೆ ಮಾಡದೆ ರೈತರಿಗೆ ಸಹಾಯ ಮಾಡುವಂತಿಲ್ಲ- ಚಿಕ್ಕ ರಾನ್ ಅಂತಾ ಜಾಗಗಳಲ್ಲಿ ಮಳೆ ಬೀಳುವುದಿಲ್ಲ,ಅಲ್ಲಿ ಏನೊಂದೂ ಬೆಳೆ ಬೆಳೆಸಲು ಸಾಧ್ಯವಿಲ್ಲ.ಅಲ್ಲಿನ ರೈತಾಪಿ ಜನರಿಗೆ ಸಹಾಯ ಮಾಡಲು ಆ ಸುಡು ಬಿಸಿಲನ್ನು ಉಪಯೋಗಿಸಿ ಅವರ ಆ ಭೂಮಿಯಲ್ಲಿ ಸೌರ ಶಕ್ತಿ ಉತ್ಪಾದನೆ ಮಾಡುವುದರಿಂದ ಮಾತ್ರ ಸಾಧ್ಯ. ನಿಮ್ಮ ರೈತರಿಗೆ ನೀವು ಮಾಡಿದ ಸಹಾಯವೇನೆಂದು ಕೇಳಿದರೆ ಇದೇ ಗುಜರಾತಿನ ಸರಕಾರದ ಉತ್ತರವಾಗಿದೆ.
ಅರಬ್ಬೀ ಸಮುದ್ರದ ಸಮೀಪದಲ್ಲಿರುವ ಪೋರ್ ಬಂದರದ ಹತ್ತಿರದ(ಗಾಂಧೀಜಿಯವರ ಊರು) ಹಿನ್ನೀರಿನ ಪ್ರದೇಶಗಳಲ್ಲೂ ಇದೇ ಕಥೆ, ಸ್ವಾತಂತ್ರ್ಯ ಹೋರಾಟದ ಕಾಲಕ್ಕೂ ಮೊದಲಿಂದ ಈ ಪ್ರದೇಶ ಉಪ್ಪು ತಯಾರಿ ಮಾಡುತ್ತಿದ್ದ ಸ್ಥಳಗಳು, ಕೃಷಿಗೆ ನಿರುಪಯುಕ್ತ ಭೂಮಿ, ಉಪ್ಪಿನ ಸಾಂದ್ರತೆ ಹೆಚ್ಚಿರುವ ಜಾಗ.
ಕೆಲವೊಂದು ಹಳ್ಳಿಗಳಲ್ಲಿ, ಮುಖ್ಯವಾಗಿ ಚರಂಕಾ ಹಳ್ಳಿಯಲ್ಲಿ ಹಸಿವಿನಿಂದ ಬಾಧಿತರಾದ ರೈತರು ಸೌರ ಉದ್ಯಾನಗಳಲ್ಲಿ ಕೆಲಸ ಮಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ನುರಿತ ಕಾರ್ಮಿಕರಾಗಿ ಕೈ ತುಂಬಾ ಸಂಪಾದಿಸುತ್ತಿದ್ದಾರೆ. ಅಲ್ಪ ಸಂಖ್ಯಾತ ಕಾರ್ಮಿಕನೊಬ್ಬನಲ್ಲಿ ನೀನು ದಿನವೊಂದಕ್ಕೆ ಕೇವಲ ರೂ.೨೦೦-೩೦೦ (೪-೫ ಡಾಲರ್)ಸಂಪಾದನೆಯಿಂದ ಸಂತುಷ್ಟನಿದ್ದೀಯ ಎಂದು ಪ್ರಶ್ನಿಸಿದ್ದಕ್ಕೆ ಅವನು ನಾನು ತಿಂಗಳಲ್ಲಿ ೧೫ ದಿನ ಮಾತ್ರ ದುಡಿಯುತ್ತಿದ್ದೇನೆ, ನಾನು ತಿಂಗಳಿಡೀ ದುಡಿದರೆ,ವರ್ಷವಿಡೀ ನಮ್ಮ ದೇಶದ ನನ್ನಂತ ಅಲ್ಪಸಂಖ್ಯಾತ ಕಾರ್ಮಿಕನಿಗಿಂತ ೪ ಪಟ್ಟು ಸಂಪಾದಿಸಬಲ್ಲೆ, ಹಾಗಿರುವಾಗ ಯಾರು ದೂರು ಹೇಳುತ್ತಾರೆ.ನೀರಿಲ್ಲದ ಬೆಳೆ ಬೆಳೆಯಲಾಗದ ಭೂಮಿಯಲ್ಲಿ,ಸಕಾಲದಲ್ಲಿ ಹಸಿದ ರೈತ ಜನರಿಗೆ ಕೈಗಾರಿಕೋದ್ಯಮದಲ್ಲಿ ತರಬೇತಿ ದೊರೆತು ವರ್ಷವಿಡೀ ಉದ್ಯೋಗ, ಸಂಪಾದನೆ ಮಾಡುವಂತಾಗಿದೆ.
ಉಕ್ಕು-ಕಬ್ಬಿಣದ ಉದ್ಯಮ- ಚೀನಾ(ತೈವಾನ್) ದೇಶವು ಗುಜರಾತಿನಲ್ಲಿ ರೂ.೧ಕೋಟಿ ತೊಡಗಿಸಲು ಮುಂದು ಬಂದಿದೆ. ದೇಶದ ಬೇರೆ ರಾಜ್ಯಗಳಿಗೆ ಯಾವುದಕ್ಕೂ ಚೀನಾ ದೇಶದ ಕಬ್ಬಿಣ ತಯಾರಕರನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಉಳಿದೆಲ್ಲ ರಾಜ್ಯಗಳವರು ತಮ್ಮಲ್ಲಿದ್ದ ಕಬ್ಬಿಣದ ಅದುರನ್ನು ಚೀನಾದವರಿಗೆ ರಫ್ತು ಮಾಡಿ, ಪೂರ್ಣ ತಯಾರಾದ ಕಬ್ಬಿಣವನ್ನು ಅಮದು ಮಾಡಿಕೊಂಡು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ. ಚೀನಾ ದೇಶವು ಗುಜರಾತಿನಲ್ಲಿ ಉತ್ತಮ ಗುಣಮಟ್ಟದ ಕಬ್ಬಿಣವನ್ನು ತಯಾರಿಸಲು ಮುಂದು ಬಂದಿದೆ.
ತೈವಾನಿನ ಕಬ್ಬಿಣ ತಯಾರಕರು “‘China Steel Corporation”ಗುಜರಾತ್ ಸರಕಾರದೊಂದಿಗೆ ಉಭಯರ ಮಧ್ಯದಲ್ಲಿ ಒಪ್ಪಂದ ಪತ್ರವೊಂದನ್ನು ಸಹಿ ಮಾಡಿದೆ. ಅದರಂತೆ ದಕ್ಷಿಣ ಗುಜರಾತದ ದಹೇಜ್ ನಲ್ಲಿ “Dahej GIDC ” ವಿದ್ಯುತ್ ಶಕ್ತಿಯಿಂದ ಕಬ್ಬಿಣ ಉತ್ಪಾದನೆಗೆ ಕಾರ್ಖಾನೆಯೊಂದನ್ನು ಸ್ಥಾಪಿಸಲಾಗುತ್ತದೆ. ಆ ಕಂಪೆನಿಯು US $ ೧೭೮ ಮಿ.(ಸುಮಾರು. ರೂ.೧,000 ಕೋಟಿ) ಯಷ್ಟನ್ನು ತೊಡಗಿಸುವುದಾಗಿ ಮಾತು ಕೊಟ್ಟಿದ್ದಾರೆ, ಅದು ತೈವಾನಿನ ಕಂಪೆನಿಯು ಈ ವರೆಗೆ ಭಾರತದಲ್ಲಿ ಮಾಡಿದ ಅತ್ಯಂತ ದೊಡ್ಡ ಬಂಡವಾಳ ಹೂಡಿಕೆ.

Image

ಚೀನಾದವರು ಗುಜರಾತಿನಲ್ಲಿ ಈ ದಶಕದೊಳಗೆ ಪೂರ್ಣ ಸಿದ್ಧವಿರುವ, ಸುತ್ತಿಟ್ಟ ಕಬ್ಬಿಣದ ಹಾಳೆ್ಯ ತಯಾರಿಯಲ್ಲಿ.

Image
ಹೊಸಾ ಕಾರು ಗುಜರಾತಿನಲ್ಲೆ ತಯಾರಾಗಿ ಜೋಡಣೆಗೊಂಡು ನಿಂತಿದೆ.
ಟಯರಿನ ಯೋಜನೆ- ಗುಜರಾತಿನೊಳಗೆ ಎಷ್ಟೊಂದು ಕೆಲಸಗಳು ಶಿಸ್ತುಬದ್ಧವಾಗಿ ನಡೆಯುತ್ತಿದೆ ಎಂದರೆ ಅದನ್ನು ನಮ್ಮ ಭಾರತದ ಒಂದು ಭಾಗವೆಂಬ ಭಾವನೆಯೇ ಬರುವುದಿಲ್ಲ.
ಕಾರ್ಖಾನೆಯೊಳಗೆ ಜರ್ಮನಿಯಿಂದ ಬಂದ ದಪ್ಪಗಿನ ರಬ್ಬರಿನ ಹಾಳೆ, ಚೀನಾದಿಂದ ಗೋಣಿಚೀಲದಲ್ಲಿ ಬಂದ ಮಸಿ ಕಪ್ಪಿನ ಹುಡಿ(ಕಾರ್ಬನ್ ) ಎಲ್ಲ ಒಟ್ಟಾಗಿ ಟಯರಾಗಿ ತಯಾರಾಗುತ್ತವೆ.ಇಲ್ಲೆಲ್ಲ ವಿಫುಲವಾಗಿ, ಅನವರತ ಇಂಧನ(ಗ್ಯಾಸ್), ವಿದ್ಯುತ್ ಶಕ್ತಿ, ನೀರಿನ ಸರಬರಾಜಿದೆ. ರಾಜ್ಯ ಸರಕಾರ ಆದಷ್ಟು ಯಾವುದೇ ಕೆಲಸಗಳಿಗೆ ತನ್ನಕೆಂಪು ಪಟ್ಟಿ ಹಚ್ಚುವುದಿಲ್ಲ, ಇಲ್ಲೆಲ್ಲೂ ಲಂಚ ಯಾಚನೆಯೂ ಕಂಡು ಬರುವುದಿಲ್ಲ. ಒಟ್ಟಿನಲ್ಲಿ ಕೈಗಾರಿಕೆ ಉದ್ದಿಮೆಗಳು ನಡೆಯುವ ವಿಧಿ-ವಿಧಾನಗಳ ಬಗ್ಗೆ ಕಾನೂನು-ಕಾಯಿದೆ ಹೇರದೇ ಸುಗಮವಾಗಿ ನಡೆಯುವಂತೆ ಅನುಕೂಲ ಮಾಡಿಕೊಡುತ್ತಾರೆ. ಹಳ್ಳಿಯ ಮಂದಿ ಹೇಳುವಂತೆ ಹೆಚ್ಚಿನ ಕೆಲಸಗಾರರು ಚಿಕ್ಕಪುಟ್ಟ ಕೈಗಾರಿಕೆ ಉದ್ದಿಮೆಗಳಲ್ಲಿ ಕೆಲಸ ಮಾಡಿ ಹೊಲಕೆಲಸದಲ್ಲಿ ಸಂಪಾದಿಸುತ್ತಿದ್ದುದಕ್ಕಿಂತ ೫೦% ಹೆಚ್ಚಿಗೆ ಗಳಿಸುತ್ತಿದ್ದಾರೆ. ರಾಜಧಾನಿಯಾದ ಅಹ್ಮದಾಬಾದಿಗೆ ಹೋಗುವ ರಸ್ತೆ ಖಾಸಾಗಿ ಸಂಸ್ಸ್ಥೆಯೊಂದು ನೋಡಿಕೊಳ್ಳುತ್ತಿದ್ದು ೪ ಸಾಲು ವಾಹನಗಳು(four lanes) ಓಡಾಡುವಂತಿದೆ. ಅದು ಬದಲಾಗುತ್ತಿರುವ, ಕೈಗಾರೀಕರಣವಾಗುತ್ತಿರುವ ರಾಜ್ಯದ ಒಳನಾಡು, ಹಳ್ಳಿಗಳನ್ನು ಹಾದು್ಕೊಂಡು ಹೋಗುತ್ತದೆ.
ಈಗಿನ ದಿನಗಳಲ್ಲಿ ಗುಜರಾತ್ ನಮ್ಮ ದೇಶದ ೫% ಜನಸಂಖ್ಯೆಯನ್ನು ಹೊಂದಿದೆ, ಆದರೆ ಕೈಗಾರಿಕೋದ್ಯಮಗಳಿಂದ ಅದರ ಆದಾಯ ಇಡೀ ದೇಶದ ೧೬% ಆಗಿದೆ, ಹಾಗೂ ರಪ್ತಿನಿಂದ ಅದಕ್ಕೆ ದೇಶದ ೨೨% ಆದಾಯವಿರುತ್ತದೆ.

ಸಬರ್ಮತಿ ನದಿ ಪಕ್ಕದ ಗುಜರಾತ, ಇದು ಯವುದೋ ಅಂತರ್ಜಾಲದ ಮುಂದುವರಿದ ದೇಶದ ಚಿತ್ರವಲ್ಲ ! ! !

Image

ನಾನೇನು ನರೇಂದ್ರ ಮೋದಿಯವರ ಹಿಂಬಾಲಕಳಲ್ಲ, ಆದರೆ ಕೆಲಸ ಮಾಡಿದವರನ್ನು ಮೆಚ್ಚಿದಾಗಲೇ ನಾವು ಅವರಿಗೆ ಉತ್ತೇಜನ ಕೊಟ್ಟಂತಾಗುತ್ತದೆ.
ಈ ವ್ಯಕ್ತಿಯ ಪೂರ್ಣ ಹೆಸರು ನರೇಂದ್ರ ದಾಮೋದರದಾಸ್ ಮೋದಿ. ಇವರು ಗುಜರಾತ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಉನ್ನತ ಪದವಿಯನ್ನು(masters degree ) ಓದಿದ್ದಾರೆ. ಸತತವಾಗಿ ೪ ಬಾರಿ ಗುಜರಾತಿನ ಮುಖ್ಯಮಂತ್ರಿಯಾಗಿ ಚುನಾಯಿತರಾದುದು ಇವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿ. ಇವರು ೨೦೦೫,೨೦೦೬,೨೦೦೭,೨೦೦೮,೨೦೦೯,೨೦೧೦ ರ ವರ್ಷಗಳಲ್ಲಿ ದೇಶದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದಾರೆ.

 

Image

 

ಮಾಜೀ ಭಾರತೀಯ ಸೇನಾದಳದ ಮುಖ್ಯಸ್ಥ ಜ.ವಿ.ಕೆ.ಸಿಂಗ್ ಇವರ ಕೆಲಸವನ್ನು, ವ್ಯಕ್ತಿತ್ವವನ್ನು ಮೆಚ್ಚಿಕೊಂಡವರು, ಮೋದಿಯವರ ಸಭೆಯೊಂದಕ್ಕೆ ವಿ.ಕೆ.ಸಿಂಗ್ ನಿವೃತ್ತ ಸೇನಾ ಮಂದಿಗಳನ್ನು ಆಹ್ವಾನಿಸಿದ ಸಂದರ್ಭದಲ್ಲಿ.

ಈ ಲೇಖನ ಶ್ರೀಯುತ ಸುರೇಶ್ ರಾವ್ ಸುಲೇಖಾದಲ್ಲಿ ಬರೆದ ಲೇಖನದ ಅನುವಾದ, ಅದನ್ನು ಪೂರ್ಣವಾಗಿ ಇಲ್ಲಿ ಅನುವಾದಿಸಿಲ್ಲ.
http://education.sulekha.com/gujarat-state-is-india-s-guangdong-china_599606_blog

 

Advertisements

4 thoughts on “ನರೇಂದ್ರ ಮೋದಿಯವರ ನಾಯಕತ್ವದ ಗುಜರಾತ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s