ಮೈಸೂರಿನ ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಕುಸ್ತಿ ಪಂದ್ಯ ಮತ್ತು ೧೦೮ ಸೂರ್ಯ ನಮಸ್ಕಾರ

ಮೈಸೂರಿನ ಹೊರಗಿರುವ ಈ ದೇವಸ್ಥಾನ ಸುಮಾರು ೨೦ ವರ್ಷ ಹಳೆಯದು. ಹೊಯ್ಸಳ ವಂಶದ ಆಳ್ವಿಕೆಯ ಕಾಲದ, ಗತ ಚರಿತ್ರೆಯ ಉಲ್ಲೇಖವಿರುವ ದೇವಸ್ಥಾನವಿದು. ಪ್ರಾಯಶಃ ನಮ್ಮ ಅಂದಿನ ದಿನಗಳಲ್ಲಿ ನಮ್ಮ ಧಾರ್ಮಿಕ ವಿಧಿಗಳು,ಹಬ್ಬಹರಿದಿನಗಳು, ದೇವಾಲಯಗಳು ಜನಸಾಮಾನ್ಯನ ಜೀವನವನ್ನು ಶ್ರೀಮಂತಗೊಳಿಸಲಿದ್ದವು. ಆದರೆ ಈಚಿನ ದಿನಗಳಲ್ಲಿ ಅದು ನಮ್ಮಲ್ಲಿ ಒಡಕನ್ನು ತರುವ ಮಾಧ್ಯಮವೋ ಎಂಬ ಸಂಶಯವನ್ನು ಉಂಟು ಮಾಡುತ್ತವೆ.

mysore puttur trip june 2009 032
ಈ ದೇವಾಲಯವು ಇಂದಿಗೆ ಸಾವಿರ ವರ್ಷಕ್ಕೂ ಹಿಂದಿನದು. ಇದು ನೂರಾರು ವರ್ಷಗಳಿಂದ ರಾಜ್ಯಭಾರ ಮಾಡುತ್ತಿದ್ದ ವಿವಿಧ ರಾಜರ ಕಾಲದಲ್ಲಿ ಜೀರ್ಣೋದ್ಧಾರಗೊಂಡು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ ನಡೆದುಕೊಂಡು ಬಂದಿದೆ. ತಲೆ ತಲಾಂತರದಿಂದ ಇದರ ಆಡಳಿತವನ್ನು ಉಪ್ಪಾರ ಶೆಟ್ಟರ ಮಂದಿಗಳೇ ನಡೆಸಿಕೊಂಡು ಬಂದಿದ್ದಾರೆ. ಈಗಲೂ ಈ ಮಂದಿಗಳು ಈ ಪ್ರದೇಶದಲ್ಲಿ ಬಹಳ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಕಳೆದ ಶತಮಾನದಲ್ಲಿ(೧೯೦೮ರ ಕಾಲದಲ್ಲಿ) ಗ್ರಾಮದ ಜನತೆ ಪ್ಲೇಗಿನ ಧಾಳಿಗೆ ತುತ್ತಾಗಿ, ಬದುಕಿ ಉಳಿದ ಕೆಲವರು ವಲಸೆ ಹೋದರು. ಹಾಗಾಗಿ ಈ ಪ್ರದೇಶ, ದೇವಸ್ಥಾನ ನಿರ್ಲಕ್ಷಿಸಲ್ಪಟ್ಟಿತು. ಇತ್ತೀಚೆಗೆ ೨೦ ವರ್ಷಗಳ ಹಿಂದೆ, ಮೈಸೂರಿನ ಶ್ರೀಯುತ ಜಿ.ಎನ್. ಅನಂತವರ್ಧನರ ಗಮನ ಸೆಳೆಯುವಂತ ಸಣ್ಣ ಘಟನೆ ನಡೆದು,ದೇವಸ್ಥಾನದ ಅಸ್ಥಿತ್ವ ಬೆಳಕಿಗೆ ಬಂದಿತು. ವ್ಯವಸಾಯಕ್ಕಾಗಿ ಭೂಮಿಯನ್ನು ಹದಗೊಳಿಸುತ್ತಿರುವಾಗ ಮಣ್ಣಿನಡಿಯಲ್ಲಿ ಶಿಲಾ ಶಾಸನ, ದೇವರ ಮೂರ್ತಿ,ಶಿಲ್ಪಗಳು ದೊರಕಿದವು. ಇವು ಮುಂದುವರಿದು, ಅನಂತ ವರ್ಧನರನ್ನು ಮತ್ತು ಉಳಿದ ಆಸಕ್ತರನ್ನು,ಗ್ರಾಮಸ್ಥರನ್ನು ಪ್ರೋತ್ಸಾಹಕರನ್ನು ಮಹಾಲಿಂಗೇಶ್ವರನು ಮತ್ತೊಮ್ಮೆ ತಲೆಯೆತ್ತಿ , ತನ್ನ ಸೇವೆಗೈಯ್ಯುವವರನ್ನು ಪೋಷಿಸುವಂತಾಯಿತು. ದೇವಾಲಯವು ೧೯೯೪ ಸೆಪ್ಟೆಂಬರ್ ೨೧ರಂದು ಊರ್ಜಿತಗೊಂಡಿತು. ಇದರಲ್ಲಿ ಧರ್ಮಸ್ಥಳದ ಶ್ರೀಯುತ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಪಾತ್ರವು ಹಿರಿಯದು.

DSC02571mahalingeshwara

ಅಂದಿನಿಂದ ಇಂದಿನ ವರೆಗೂ ಮಹಾಲಿಂಗೇಶ್ವರನ ಕೃಪೆಯಿಂದ ಹಳ್ಳಿಯ ಜನರು ಅನಂತವರ್ಧನರ ನೇತೃತ್ವದಲ್ಲಿ ತಮ್ಮ ನಿತ್ಯ ಜೀವನ, ವಿಧ್ಯಾಭ್ಯಾಸಗಳಲ್ಲಿ ಸುಧಾರಿಸಿಕೊಳ್ಳುತ್ತ ಬಂದಿದ್ದಾರೆ. ಜನರನ್ನು ಒಗ್ಗೂಡಿಸಲು ಹಮ್ಮಿಕೊಂಡ ಕಾರ್ಯಕ್ರಮಗಳು ಹಲವಾರು.

೧.ಮಹಾಶಿವರಾತ್ರಿಯಂದು ಜಾತ್ರೆ ಮತ್ತು ಸುತ್ತಲಿನ ಒಂದೊಂದು ಗ್ರಾಮದವರಿಂದ ಪೌರಾಣಿಕ ನಾಟಕ.
೨.ಸಾಮೂಹಿಕ ಮದುವೆ.
೩.ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ.

ಜಾತ್ರೆಗೆ ಸುತ್ತುಮುತ್ತಲಿನ ಜನ ಸೇರುತ್ತಾರೆ. ಆ ಸಂದರ್ಭದಲ್ಲಿ ನಡೆಯಲಿರುವ ನಾಟಕಕ್ಕೆ ತಿಂಗಳ ಮುಂಚಿತ ಅಭ್ಯಾಸ ಪ್ರಾರಂಭವಾಗುತ್ತದೆ.
ಈ ನಾಟಕಗಳು ಜನರ ಮನಮುಟ್ಟುವಂತಹ ನೀತಿಯಿರುವ ಕಥಾವಸ್ತು ಹೊಂದಿರುತ್ತವೆ. ಅವುಗಳು ಜನರನ್ನು ಯೋಚಿಸಲು ಪ್ರಚೋದಿಸುವಂತಿರುತ್ತವೆ. ಜನರಿಗೆ ಶಿಸ್ತುಬದ್ಧ ಜೀವನ ರೂಡಿಸಲು, ಸ್ವಚ್ಚತೆಯ ಬಗ್ಗೆ ತಿಳಿಸಲು ಸಾಮೂಹಿಕ ಕ್ರೀಡಾಕೂಟ,ಸ್ಪರ್ಧೆ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲಿ ಈಗ ಹಳ್ಳಿ ಜನರ ಮದುವೆ, ಸಮಾರಂಭಗಳಿಗೆ ಹೊಸದೊಂದು ಸಭಾಭವನವೊಂದು ಎದ್ದಿದೆ. ಇವೆಲ್ಲವಕ್ಕೂ ಮೈಸೂರಿನ ಸಹೃದಯರ ಕೃಪೆಯಿದೆ.

DSCN0773GARADI

ಇತ್ತೀಚೆಗೆ ಹೊಸದಾಗಿ ನಿರ್ಮಾಣವಾದ ಮಹಾಲಿಂಗೇಶ್ವರನ ಗರಡಿ ಮನೆ, ಮತ್ತು ಕುಸ್ತಿ ಅಖಾಡ

DSCN0782GARADAI KANA

ಕೆ.ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಕುಸ್ತಿ ಪಂದ್ಯ

DSCN0816

ಇತ್ತೀಚೆಗೆ ಗ್ರಾಮಸ್ಥ ಯುವಜನರನ್ನು ಕುಡಿತ, ಜೂಜು ಇತ್ಯಾದಿ ದುರಾಭ್ಯಾಸಗಳಿಂದ ದೂರವಿರಿಸಲು ಕುಸ್ತಿ,ಮಲ್ಲಯುದ್ಧ ತರಬೇತಿ, ವರ್ಷದಲ್ಲೊಮ್ಮೆ ಅವರ ಮಧ್ಯದಲ್ಲಿ ಪೈಪೋಟಿ ನಡೆಸಲು ಪ್ರಾರಂಭಿಸಿದ್ದಾರೆ. ಆ ಪ್ರಯುಕ್ತ ದೇವಾಲಯದ ಸಮೀಪದಲ್ಲಿ ಗರಡಿ ಶಾಲೆಯೊಂದನ್ನು ಕಟ್ಟಲಾಯಿತು. ದೇವಾಲಯದ ಆವರಣದ ಪಕ್ಕದಲ್ಲಿ ಗೋಶಾಲೆಯೊಂದಿದೆ. ಸ್ವಲ್ಪ ಆರ್ಥಿಕ ಸ್ಥಿತಿಯುಳ್ಳ ನೆರೆಕರೆಯ ಮಂದಿ ದೇವಸ್ಥಾನಕ್ಕೆಂದು ಆಕಳುಗಳನ್ನು ದಾನವಿತ್ತಿದ್ದಾರೆ.

ಜನವರಿ ೧೩ರ ಮುಂಜಾವಿನಲ್ಲಿ ಹೆಮ್ಮನ ಹಳ್ಳಿ

DSC02532hemmana halli

ಜನವರಿ ೧೩ರ ರಂದು ಮುಂಜಾನೆ ೧೦೮ ಸೂರ್ಯನಮಸ್ಕಾರಗಳೊಂದಿಗೆ ನೆರೆದ ಮಂದಿಗೆ ಯೋಗಭ್ಯಾಸದ ಉಪಯೋಗಗಳನ್ನು ತಿಳಿಸಲಾಯಿತು.

DSC02564yoga prADARSHANA

ಯೋಗಾಭ್ಯಾಸದ ಮಹತ್ವಗಳನ್ನು ನೆರೆದಿರುವ ಗ್ರಾಮಸ್ಥರಿಗೆ ತಿಳಿಸುವ ಪದ್ಧತಿ

DSC02521surya

DSC02523yoga

ಮುಂಜಾನೆಯಲ್ಲಿ ನೆರೆದ ಮೈಸೂರಿನ “ಸಂಸ್ಕಾರ ಸಂಘಟನ ಸೇವೆ”ಯ ಯೋಗಪಟುಗಳು

ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡುವ ಕೆಲಸಗಳಿಗೆ ಎಷ್ಟೋ ಅನಿರೀಕ್ಷಿತ ಫಲಪ್ರಾಪ್ತಿಯಾಗುತ್ತದೆ, ಮತ್ತು ಕೆಲವೊಂದು ಘಟನೆಗಳು ಪವಾಡವೆಂಬಂತೆ ಬೆಂಬಲವನ್ನು ಕೊಡುತ್ತದೆ. ಈ ದೇವಸ್ಥಾನದ ಬಗ್ಗೆ ನಾನು ಕೇಳಿದ ವಿಷಯ, ಸುದ್ಧಿ ನನ್ನಲ್ಲಿ “ನಾವು ನಾವಿರುವ ಸಮಾಜಕ್ಕೆ ಉಪಯೋಗಿಯಾಗಿರಬೇಕು”ಎಂಬ ಭಾವನೆಯನ್ನು ಧೃಡಗೊಳಿಸಿದೆ. ಇಲ್ಲಿನ ಎಲ್ಲಾ ಚಟುವಟಿಕೆಗಳಿಂದ, ಆ ಗ್ರಾಮೀಣ ಜನರೆಷ್ಟು ಉಪಕೃತರಾದರೋ, ಅವರಿಗೆ ಸಹಾಯ ಮಾಡಿದ ಮತ್ತು ಅವರ ಒಡನಾಟ ಹೊಂದಿದ ಮೈಸೂರಿನ ನಗರವಾಸಿಗಳೂ,ಹೊರಗಿನವರೂ ಅಷ್ಟೇ ಧನ್ಯರಾಗಿದ್ದಾರೆ. ನಮ್ಮ ಜೀವನವಿರುವುದೇ ಕೊಂಡು-ಕೊಳ್ಳುವುದರಿಂದ, ಹಾಗಾಗಿ ಈ ಮಾದರಿಯ ಬೇರೆ ಸಂಘ-ಸಂಸ್ಥೆಗಳು ಹುಟ್ಟಲಿ,ಮೇಲೆ ಬರಲಿ, ಜೀವಿಗಳನ್ನು ಪೋಷಿಸಲಿ.

ಸಂಪರ್ಕಿಸಲು ಇಚ್ಚಿಸುವವರಿಗೆ ಈ ಕೆಳಗಿನಂತಿದೆ ವಿಳಾಸ ಮತ್ತು ದೂರವಾಣಿ.

ಜಿ.ಎನ್.ಅನಂತವರ್ಧನ,

೬೫,ಗುರಿಕಾರ ದೇವಣ್ಣ ರಸ್ತೆ,

೧ನೇ ತಿರುವು,ಖಿಲ್ಲೆ ಮೊಹಲ್ಲಾ,ಮೈಸೂರು ,೫೭೦೦೦೪
೦೮೨೧-೨೪೪೭೯೫೨

Advertisements

2 thoughts on “ಮೈಸೂರಿನ ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಕುಸ್ತಿ ಪಂದ್ಯ ಮತ್ತು ೧೦೮ ಸೂರ್ಯ ನಮಸ್ಕಾರ

    • ಜನ ಪ್ರಚಾರ, ಪ್ರಾಮುಖ್ಯತೆ ಈಗಿನ ದಿನಗಲ್ಲಿ ಬಯಸುವುದೇನೋ ಹೆಚ್ಚು, ಆದರೆ ಅದರಿಂದಾಗಿಯೇ ಹೊಸ ವಿಷಯ ಹೊರಗಿನವರಿಗೆ ತಿಳಿಯುತ್ತದೆ. ಅದಕ್ಕಾಗಿಯೇ ನಾನು ನನ್ನ ಪ್ರಯತ್ನ ಮಡುತ್ತಿರುವುದು. ಒಳ್ಳೆ ಕೆಲಸ, ಉದ್ದೇಶಗಳಿಗೆ ನಾವು ಬೆಳಕು ಬೀರಿದರೆ ಅದಕ್ಕೆ ಬೇಕಿರುವ ಸಹಾಯ ಧನರೂಪದಲ್ಲೋ, ಇಲ್ಲ ದೈಹಿಕವಾಗಿಯೋ ಉತ್ಸುಕರಿರುವ ಮಂದಿಯಿಂದ ಬರಲಿ ಎಂಬುವುದೇ ನನ್ನ ಉದ್ದೇಶ.
      ಶೈಲಜ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s