ಅನಂತನ ಪತ್ರ

ಅನಂತನ ಪತ್ರ  
ಇತ್ತೀಚೆಗೆ ನನ್ನ ಸೋದರಭಾವನಿಂದ ಬಂದ ಈ ಪತ್ರ ನನಗೆ ಸಂತೋಷ ಕೊಟ್ಟಿತು. ವೈಶಿಷ್ಟ್ಯಪೂರ್ಣವಾದ ಈ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲದಿಂದ, ಈ ನನ್ನ ಬ್ಲಾಗ್ ನ ಮೂಲಕ ನನ್ನ ಸಂತೋಷದಲ್ಲಿ ನಿಮಗೂ ಪಾಲು ಕೊಡುತ್ತಿದ್ದೇನೆ. ಅನಂತನ ಕಿರು ಪರಿಚಯ.ವೃತ್ತಿಯಲ್ಲಿ ಅನಂತ ವರ್ಧನ ಮೈಸೂರಿನಲ್ಲಿ ಚಾರ್ಟೆಡ್ ಎಕೌಂಟೆಂಟ್. ಹುಟ್ಟಿ ಬೆಳೆದ ಮೈಸೂರಿನೊಂದಿಗೆ ಅವನ ನಂಟು ಬಹುಶಃ ಅವನಿಂದ ಈ ಕೆಲಸಗಳನ್ನು ಮಾಡಿಸುತ್ತಿದೆ. ಈಗ ೨೫ ವರ್ಷಗಳ ಹಿಂದೆ ಮೈಸೂರಿನ ಸಮೀಪದ ಹೆಮ್ಮನ ಹಳ್ಳಿಯಲ್ಲಿ ಭೂಮಿಯೊಳಗೆ ದೊರಕಿದ ಶಿಲಾಶಾಸನದಲ್ಲಿ ಚಾರಿತ್ರಿಕವಾಗಿ ನಡೆದು ಬಂದ ದೇವಾಲಯವೊಂದರ ಬಗ್ಗೆ ಉಲ್ಲೇಖಿಸಿದುದು ಆಕಸ್ಮಿಕವಾಗಿ ಅನಂತನ ಗಮನಕ್ಕೆ ಬಂತು. ನಂತರ ನಾಟಕೀಯವಾಗಿ ಮುಂದಿನ ಘಟನೆಗಳು ಬೆಳೆದು, ಆ ಮಂದಿರದ ಜೀರ್ಣೋದ್ಧಾರವನ್ನು ಊರವರ ಹಾಗೂ ಇತರ ಪ್ರಾಮುಖ್ಯರ ಸಹಾಯವನ್ನು ಪಡೆದುಕೊಂಡು ಕೈಗೆತ್ತಿಕೊಳ್ಳಲಾಯಿತು. ಆ ನಂತರದ ವರ್ಷಗಳಲ್ಲಿ ದೇವಾಲಯನ್ನಾಧರಿಸಿ ಅಲ್ಲೇ ಆವರಣದಲ್ಲಿ, ಹಳ್ಳಿ ಜನರ ಬೆಳವಣಿಗೆಗೆ ಬೇಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಮಂದಿರ ಕೇವಲ ಧಾರ್ಮಿಕವಾಗಿ ಕೆಲಸ ಮಾಡುತ್ತಿದೆ ಎಂದರೆ ತಪ್ಪಾದೀತು, ಇಲ್ಲಿನ ಕೆಲಸ,ಕಾರ್ಯಗಳ ಉದ್ದೇಶ ಇಲ್ಲಿನ ಅನಕ್ಷರಸ್ಥ, ಬಡಜನರ ಬೆಳವಣಿಗೆ,ಉದ್ಧಾರ. ನಾನು, ಇನ್ನಿತರ ಮೈಸೂರುವಾಸಿಗಳಂತೆ ಅನಂತನ ಈ ಕೆಲಸಗಳ ಪ್ರತ್ಯಕ್ಷ ದರ್ಶಿ.ಈ ಪತ್ರ ಆ ಪ್ರಯುಕ್ತ ನಾನೂ, ನನ್ನ ಪತಿ ಶ್ಯಾಮ ಭಟ್ಟರೂ ಮಂದಿರದ ಕೆಲಸಗಳಿಗೆಂದು ಮಾಡಿದ ದೇಣಿಗೆಗೆ ಅನಂತನಿಂದ ಬಂದ ಉತ್ತರ. ನೀವು ಆಸಕ್ತರಿದ್ದರೆ ನಾನು ಅದರ ಮೇಲೆ ಬರೆದ ಬ್ಲಾಗೊಂದನ್ನು ಓದಬಹುದು.

http://bhatshaila.sulekha.com/blog/post/2009/07/mahalingeshwara-temple-of-hemmanahalli-in-mysore.htm

ಪ್ರಿಯ ಶೈಲ,
ನೀನು ಕಳುಹಿಸಿದ ದೇಣಿಗೆಯ ರಸೀದಿಯನ್ನು ಲಗತ್ತಿಸಿದ್ದೇನೆ, ವಿಳಂಬಕ್ಕೆ ಕ್ಷಮೆ ಇರಲಿ, ಕೃತಜ್ಞತೆಗಳು. ಶ್ರೀಮನ್ನಾರಾಯಣನ ವಾಹನವೂ,ರಕ್ಷಕನೂ ಗರುಡ. ಹಾಗಾಗಿ ಆರಕ್ಷಕ ಇಲಾಖೆಯವರು ತಮ್ಮ ಜೀಪಿಗೆ ಗರುಡ ಎಂದು ಹಾಕಿಕೊಳ್ಳುವರು.ಸೈನ್ಯದ ಚಿಹ್ನೆ ಗರುಡ ರೆಜಿಮೆಂಟ್ ಜಗದ್ವಿಖ್ಯಾತಿ. ಗರುಡರನ್ನು ಟಂಕಿಸುವ ಶಾಲೆ ಗರುಡಿ. ಹಿಂದಿನ ಕಾಲದಲ್ಲಿ ರಾಜರುಗಳಿಗೆ ಸೈನ್ಯ ಬಹಳ ಮುಖ್ಯ. ಅವರಿಗೆ ಎಲ್ಲಾ ತರಹದ ಯುದ್ಧ ಶಿಕ್ಷಣ, ಕಲೆ ಅತ್ಯಗತ್ಯ. ಅವರಿಗೆಲ್ಲ ತರಬೇತಿಗೆ ಗರಡಿ. ಪ್ರತಿಯೊಂದು ಗ್ರಾಮದಲ್ಲಿಯೂ ಗರಡಿ. ಈಗಿನ ಕಾಲದ ಜಿಮ್ ಗರಡಿಯಿಂದ ಉದ್ಭವಿಸಿದ್ದು. ಬದಲಾದ ಕಾಲದೊಂದಿಗೆ ಗರಡಿ ಕೇವಲ ಕುಸ್ತಿಗೆ ಸೀಮಿತಗೊಂಡಿತು. ಮೈಸೂರಿನ ಮಹಾರಾಜರು ಇದಕ್ಕೆ ಬಹಳ ಬೆಂಬಲ ಕೊಟ್ಟರು.ನಮ್ಮ ದೇವಾಲಯದಲ್ಲಿ ಯುಗಾದಿಗೆ ಕುಸ್ತಿ ಪಂದ್ಯ ನಡೆಯುವುದು.ಈಗ ಕುಸ್ತಿ, ಕುಸ್ತಿಪಟುಗಳ ವ್ಯಾಯಮಕ್ಕೂ, ಕಲೆಯ ಅಭಿವೃದ್ಧಿಗೆ ಸೀಮಿತವಾಗಿದೆ. ನಿನ್ನೆ ತಾ೮-೪-೧೨ರಂದು ನಮ್ಮ ದೇವಾಲಯದಲ್ಲಿ ಗರಡಿ ಮನೆಗೆ ಭೂಮಿ ಪೂಜೆ ಆಯಿತು.
ಇನ್ನೊಂದು ತಿಂಗಳಲ್ಲಿ ಗರಡಿ ಶಾಲೆ ತಯಾರಿ. ಕುಸ್ತಿಕಲೆಯನ್ನು ಉಚಿತವಾಗಿ ಹೇಳಿಕೊಡಲಾಗುವುದು. ಮಕ್ಕಳ ಶಿಬಿರದಲ್ಲೂ ಕುಸ್ತಿ ಕಲಿಸಲಾಗುವುದು. ಬೆಳೆವ ಮಕ್ಕಳ ಮೈಕೈ ಗಟ್ಟಿಮುಟ್ಟಾಗುವುದು. ಯೋಗದಲ್ಲಾದರೋ ಮುಂದುವರಿದು ಧ್ಯಾನದ ವರೆಗೆ ಸಾಗಬೇಕು.ಕುಸ್ತಿಯಾದರೆ ಹಾಗಲ್ಲ, ತಾಮಸ ಸ್ವರೂಪದ್ದು. ಹೋರಾಟವೇ ಬದುಕು, ಬದುಕಿನ ಸ್ಪರ್ಧೆಯಲ್ಲಿ ಕುಸ್ತಿ ಅನಿವಾರ್ಯ. ಕುಸ್ತಿಯ ಮೂಲಪುರುಷ ಆಂಜನೇಯ. ಮುಂದುವರಿದು ಭೀಮ, ಜಾಂಬವ, ಬಲರಾಮ, ಜರಾಸಂಧ, ದುರ್ಯೋಧನ, ಕೀಚಕ, ಚಾಣೂರ ,ಮುಷ್ಟಿಕ, ಬಕಾಸುರ, ಹಿಡಿಂಬ….ಇತ್ಯಾದಿ.
ನಮ್ಮ ಈ ಗರಡಿ ಶಾಲೆ ಸುಮಾರು ರೂ ಒಂದು ಲಕ್ಷದ ಅಂದಾಜಿನಲ್ಲಿ ನಿರ್ಮಾಣಗೊಳ್ಳುವುದು. ೨೩*೨೫ ಅಡಿ ನಾಲ್ಕು ಗೋಡೆ, ಮೇಲಕ್ಕೆ ಹಂಚು ಚಾವಣಿ. ಕೋಣೆಯೊಳಗೆ ನೆಲಕ್ಕೆ ಉತ್ತಮ ಮಣ್ಣು ಹಾಕಿ ಕುಸ್ತಿಯೋಗ್ಯವಾಗಿ ಮಾಡುವುದು.ಆ ಮಣ್ಣಿಗೆ ಔಷಧೀಯ ಸಸ್ಯಗಳನ್ನು ಹಾಕಲುಂಟು. ನಿನ್ನ ದೇಣಿಗೆಯನ್ನೂ ಗರಡಿಮನೆಯ ತಯಾರಿಗೆ ಬಳಸುವೆವೆಂದು ತಿಳಿಸಲು ಇಷ್ಟು ದೀರ್ಘ ಪತ್ರ. ಉದ್ಘಾಟನೆಗೆ ನೀವು ಬರಬೇಕು.ಶ್ಯಾಮನಿಗೆ ನನ್ನ ನಮಸ್ಕಾರಗಳು.
ಇತೀ,
ಅನಂತ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s